ಪೆಥಾಲಜಿ ಮ್ಯೂಸಿಯಮ್
ಪೆಥಾಲಜಿ ಎಂಬುದು ವೈದ್ಯವಿಜ್ಞಾನದ ಒಂದು ವಿಷಯ. ಇದನ್ನು ವಿಕೃತ ವಿಜ್ಞಾನ ಎಂದು ಭಾಷಾಂತರಿಸಿದ್ದಾರೆ. ಈ ವಿಷಯದ ಮ್ಯೂಸಿಯಮ್ ಎಂದರೆ ರೋಗ ಪೀಡಿತ ಅಂಗಾಂಗಗಳ ಪ್ರದರ್ಶನ ವ್ಯಕ್ತಿಯು ರೋಗದಿಂದ ಬಳಲುತ್ತಿರುವಾಗ ರೋಗಿಯ ಅಂಗಾಂಗಗಳು ಬದಲಾವಣೆಗಳನ್ನು ತೋರುತ್ತವೆ. ಅಂಥ ಅಂಗಾಂಗಗಳನ್ನು ಹುಡುಕಿ, ಅವು ಕೆಡದಂತೆ ರಾಸಾಯನಿಕಗಳನ್ನು ಪ್ರಯೋಗಿಸಿ, ಅವುಗಳಲ್ಲಿಯ ಬದಲಾವಣೆಗಳು ವೈದ್ಯ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತೋರುವಂತೆ ಪ್ರದರ್ಶಿಸುವುದು.
 ಪ್ರದರ್ಶಿತ ಅಂಗಾಂಗಗಳನ್ನು ಸೂಕ್ತವಾಗಿ ರೋಗಗಳ ಪ್ರಕಾರ ಇಲ್ಲವೆ ಅಂಗಾಂಗಳ ಪ್ರಕಾರ ಜೋಡಿಸಿ ಇಡುವುದು. ಉದಾಹರಣೆಗೆ ಎಲ್ಲ ರೀತಿಯ ಜಠರದ ರೋಗಗಳನ್ನು ಒಂದು ಕಡೆ ಇಡುವುದು, ಅದಲ್ಲದಿದ್ದರೆ ಒಂದೊಂದು ರೋಗದಲ್ಲಿ ತೋರಬಹುದಾದ ಎಲ್ಲ ಅಂಗಾಂಗಳನ್ನು ಒಂದು ಕಡೆ ಪ್ರದರ್ಶಿಸುವುದು.

ಒಟ್ಟಿನಲ್ಲಿ ವೈದ್ಯವಿದ್ಯಾರ್ಥಿಗಳು ಈ ಸಂಗ್ರಹಾಲಯವನ್ನು ಒಂದು ಗ್ರಂಥಾಲಯದಂತೆ ಉಪಯೋಗಿಸಲು ಅನುಕೂಲವಾಗಬೇಕು. ಗ್ರಂಥಾಲಯದಲ್ಲಿ ಗ್ರಂಥಗಳನ್ನು ಅಭ್ಯಸಿಸುವವರಿಗೆ ಮ್ಯೂಸಿಯಮ್‍ನಲ್ಲಿ ಪ್ರದರ್ಶಿಸಲ್ಪಟ್ಟ ಅಂಗಾಂಗಗಳು ಬೇಕಾಗುತ್ತದೆ. ಅಭ್ಯಸಿಸುವುದರಿಂದ ವೈದ್ಯರು ರೋಗದ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಒಬ್ಬ ಸುಪ್ರಸಿದ್ಧ ವೈದ್ಯರು ಕೆಳಗಿನಂತೆ ಹೇಳುತ್ತಾರೆ. “Pಚಿಣhoಟogಥಿ ಒuseum is ಚಿ ಐibಡಿಚಿಡಿಥಿ ಟಿoಣ ಛಿomಠಿಡಿiseಜ oಜಿ booಞs, buಣ ಣhe ಣhiಟಿgs ಣhem seಟves oಟಿ ತಿhiಛಿh booಞs ಚಿಡಿe ತಿಡಿiಣಣeಟಿ.”						(ಡಾ. ಎಸ್.ಜೆ. ನಾಗಲೋಟಿಮಠ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ